ಸಿರ್ಸಿ ಕನ್ನಡ ಇದು ಕನ್ನಡದ ಉಪಭಾಷೆಯಾಗಿದೆ, ಸಿರ್ಸಿ ಕನ್ನಡವನ್ನು ಮಲೆನಾಡಿನ ಸಿರ್ಸಿ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಾದ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೊಯಿಡಾ, ದಾಂಡೇಲಿ, ಹಳಿಯಾಳ, ಸೊರಬ ತಾಲೂಕಿನಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ. ಪಶ್ಚಿಮ ಘಟ್ಟ ಶ್ರೇಣಿಗಳ ತಪ್ಪಲಿನಲ್ಲಿ ಬರುವ ಸಿರ್ಸಿ ನಗರವು ಕನ್ನಡದ ಮೊದಲ ರಾಜವಂಶ ಕದಂಬರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಸಿರ್ಸಿ ಕನ್ನಡದಲ್ಲಿ ಹಳೆಗನ್ನಡ ಮತ್ತು ಮಲೆನಾಡಿನ ಕನ್ನಡಗಳ ಶಬ್ದವು ಹೆಚ್ಚಾಗಿ ಬಳಕೆಯಲ್ಲಿವೆ. == ಉಲ್ಲೇಖಗಳು ==